ಏರೋ ಸ್ಪೋರ್ಟ್ಸ್

ಪ್ಯಾರಾ ಸೈಲಿಂಗ್,
ಪ್ಯಾರಾ ಗ್ಲೈಡಿಂಗ್

ಪ್ಯಾರಾ ಸೈಲಿಂಗ್
ವಿಮಾನ ಯಾನದ ಅನುಭವ ನೀಡುತ್ತದೆ. ಪ್ಯಾರಾ ಸೈಲಿಂಗ್ ಆರಂಭದಲ್ಲಿ ಅಡ್ರಿನಾಲಿನ್ ಗೃಂಥಿಗಳು ವೇಗದಲ್ಲಿ ಕಾರ್ಯನಿರ್ವಹಿಸಲು ಆರಂಭಿಸುತ್ತವೆ. ಉನ್ನತ ಹಂತ ತಲುಪುತ್ತಿದ್ದಂತೆ ಎಲ್ಲವೂ ಶಾಂತವಾಗುತ್ತದೆ. ತರಬೇತಿ ನೀಡುವವರು ಆರಂಭದಲ್ಲಿ ನಿಮಗೆ ಅಗತ್ಯವಿರುವ ಎಲ್ಲ ಸಲಹೆಗಳನ್ನು ನೀಡುತ್ತಾರೆ. ನಿಮಗೆ ಪ್ಯಾರಾಸೈಲಿಂಗ್‌ನ ಉತ್ತಮ ಅನುಭವ ಸಿಗುವಲ್ಲಿ ತರಬೇತುದಾರರು ಎಲ್ಲ ರೀತಿಯ ನೆರವನ್ನು ನೀಡುತ್ತಾರೆ. ನಿಮಗೆ ನಿಜವಾದ ಅನುಭವ ಸಿಗುವುದು ಕೊಂಡೊಜ್ಜಿ ಕೇಂದ್ರದಲ್ಲಿ. ನೀವು ಯಾನದಲ್ಲಿ ಉತ್ತಮ ಅನುಭವ ಪಡೆಯಲು ಹಾಗೂ ಪ್ಯಾರಾ ಸೈಲಿಂಗ್‌ನ ಆನಂದ ಅನುಭವಿಸಲು ಅನುಭವಿ ಸಲಹೆಗಾರರು ಉತ್ತಮ ರೀತಿಯಲ್ಲಿ ನಿಮ್ಮನ್ನು ಸಜ್ಜುಗೊಳಿಸುತ್ತಾರೆ. ನಿಮಗೆ ಎಲ್ಲ ರೀತಿಯ ರಕ್ಷಣೆಯನ್ನೂ ನೀಡುತ್ತಾರೆ.

ಪ್ರಯೋಜನ:

    • ದೇಹದಲ್ಲಿ ರಕ್ತ ಸಂಚಲನ ಉತ್ತಮಗೊಳ್ಳುತ್ತದೆ
    • ದೇಹಕ್ಕೆ ಉತ್ತಮ ವಿಶ್ರಾಂತಿ ಸಿಗುತ್ತದೆ.
    • ಇದೊಂದು ರೋಚಕ ಕ್ರೀಡೆ, ಇದಕ್ಕೆ ಹೆಚ್ಚಿನ ತರಬೇತಿಯ ಅಗತ್ಯವಿರುವುದಿಲ್ಲ.
    • ನೆಲದಿಂದ 500 ಅಡಿಗಳ ಎತ್ತರದಲ್ಲಿರುವುದರಿಂದ ವಿಹಂಗಮ ನೋಟವನ್ನು ಆನಂದಿಸಬಹುದು
    • ಗೆಳೆಯರು ಹಾಗೂ ಕುಟುಂಬದ ಸದಸ್ಯರಲ್ಲಿ ಹಂಚಿಕೊಳ್ಳುವ ಅನುಭವ ಇಲ್ಲಿ ಸಿಗುತ್ತದೆ.

 

ಪ್ಯಾರಾ ಸೈಲಿಂಗ್‌ನಲ್ಲಿ ಪಾಲ್ಗೊಳ್ಳಲು ಸೂಕ್ತವಾದ ಸಲಕರಣೆಗಳ ಅಗತ್ಯವಿರುತ್ತದೆ.

ಪ್ಯಾರಾ ಗ್ಲೈಡಿಂಗ್
ಸ್ವಚ್ಛಂದದಲ್ಲಿ ನೀವು ನಿಮ್ಮನ್ನು ಕಳೆದುಕೊಳ್ಳುವ ಅನುಭವ ಸಿಗುತ್ತದೆ. ಗ್ಲೈಡಿಂಗ್ ಮಾಡುವಾಗ ಸಲಹೆಗಾರರು ನೀಡಿದ ನಿಯಮಗಳನ್ನು ಚಾಚೂತಪ್ಪದೆ ಅನುಸರಿಸಬೇಕಾಗುತ್ತದೆ. ನಿಮ್ಮ ಗ್ಲೈಡ್‌ಗೆ ಯಾವುದೇ ರೀತಿಯ ಎಂಜಿನ್ ಲಗತ್ತಿಸದೇ ಇರಬಹುದು. ಆದರೆ ನೀವು ಕೆಲವು ಕಾಲ ಗಾಳಿಯಲ್ಲಿ ತೇಲಲಿದ್ದೀರಿ. ಎತ್ತರದಿಂದ ಸಾಕಷ್ಟು ದೃಶ್ಯಗಳನ್ನು ನೀವು ವೀಕ್ಷಿಸಬಹುದು. ನೀವು ಸಾಧ್ಯವಾದಷ್ಟು ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು.

ಪ್ರಯೋಜನ:

   • ಶ್ವಾಸಕೋಶಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
   • ಎತ್ತರದಿಂದ ಕೆಳ ಜಗತ್ತಿನ ಸೌಂದರ್ಯವನ್ನು ವೀಕ್ಷಿಸಬಹುದು
   • ಮನಸ್ಸಿಗೆ ಸಾಕಷ್ಟು ವಿಶ್ರಾಂತಿ.
   • ಒಂಟಿಯಾಗಿ ಸಾಕಷ್ಟು ಕಾಲವನ್ನು ಕಳೆಯಲು ಇಲ್ಲಿ ಅವಕಾಶ ಸಿಗುತ್ತದೆ.
   • ಅಡ್ರಿನಾಲಿನ್ ಗೃಂಥಿಗಳಿಗೆ ನೆರವಾಗುತ್ತದೆ.

 

ಪ್ಯಾರಾ ಗ್ಲೈಡಿಂಗ್‌ಗೆ ಸಜ್ಜಾಗಲು ಸೂಕ್ತವಾದ ಸಲಕರಣೆಗಳ ಅಗತ್ಯವಿರುತ್ತದೆ.

 

ದಾಖಲಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Change this in Theme Options
Change this in Theme Options