ಅಕ್ವಾ ಸ್ಪೋರ್ಟ್ಸ್ (ಜಲ ಕ್ರೀಡೆ)

ರೋವಿಂಗ್, ಸೈಲಿಂಗ್, ಕಯಾಕಿಂಗ್, ವಿಂಡ್ ಸರ್ಫಿಂಗ್, ಮೀನುಗಾರರ ದೋಣಿಯಲ್ಲಿ ಶಾರ್ಟ್‌ಸೀ-ಫೇರಿಂಗ್, ಸೈಲಿಂಗ್, ರಾಫ್ಟಿಂಗ್, ವಾಟರ್ ಸ್ಕೇಟಿಂಗ್, ಜೆಟ್ ಸ್ಕೀವಿಂಗ್ ಇತ್ಯಾದಿ.

ಕೆನಾಯಿಂಗ್ ಮತ್ತು ಕಯಾಕಿಂಗ್
ಬೆಳಿಗ್ಗೆ ಅಥವಾ ಸಂಜೆ ನದಿಯಲ್ಲಿ ನೀವೇ ಪುಟ್ಟ ದೋಣಿಯನ್ನು ಹುಟ್ಟುಹಾಕಿ ಸುಂದರ ದೃಶ್ಯಗಳ ಜತೆಯಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತವನ್ನು ವೀಕ್ಷಿಸಬಹುದು. ದೇಹದ ಮೇಲ್ಭಾಗದಲ್ಲಿ ಉತ್ತಮ ಸಾಮರ್ಥ್ಯ ಹಾಗೂ ತ್ರಾಣ ಈ ಎರಡೂ ಕ್ರೀಡೆಗೆ ಅಗತ್ಯವಾಗಿ ಬೇಕು. ಅಗತ್ಯವಿರುವ ಎಲ್ಲ ಸಲಕರಣೆಗಳು ಕೇಂದ್ರಗಳಲ್ಲಿ ಸಿಗುತ್ತದೆ. ನೀವು ಯಾನ ಆರಂಭಿಸುವುದಕ್ಕೆ ಮೊದಲು ಉತ್ತಮ ತರಬೇತುದಾರರು ಎಲ್ಲ ರೀತಿಯ ಸಲಹೆಗಳನ್ನು ನೀಡುತ್ತಾರೆ. ಕೆನಾಯ್ ಹಾಗೂ ಕಯಾಕ್‌ಗಳನ್ನು ಬಳಸುವುದು ಹೇಗೆ, ಹುಟ್ಟನ್ನು ಸಮರ್ಪಕವಾಗಿ ಉಪಯೋಗಿಸುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ನೀಡುತ್ತಾರೆ. ಕೊಂಡಜ್ಜಿ, ಕಾರವಾರ ಹಾಗೂ ವಾಣಿವಿಲಾಸ ಕೇಂದ್ರಗಳಲ್ಲಿ ನೀವು ಈ ಎರಡು ಕ್ರೀಡೆಗಳ ಅನುಭವ ಪಡೆಯಬಹುದು.

ಪ್ರಯೋಜನ:

  • ಇಡೀ ದೇಹಕ್ಕೆ ಕಸರತ್ತು ನೀಡಿದಂತಾಗುತ್ತದೆ.
  • ನದಿ ಹಾಗೂ ಸರೋವರಗಳ ಅದ್ಭುತ ಅನುಭವ ಸಿಗುತ್ತದೆ.
  • ದೇಹ ಹಾಗೂ ಮನಸ್ಸಿಗೆ ಉತ್ತಮ ರೀತಿಯಲ್ಲಿ ವಿಶ್ರಾಂತಿ ಸಿಗುತ್ತದೆ.
  • ದೇಹದ ಮೇಲ್ಭಾಗವನ್ನು ಮತ್ತಷ್ಟು ಶಕ್ತಿಯುತವಾಗಿ ಮಾಡುತ್ತದೆ.
  • ಈ ಕ್ರೀಡೆಗಳ ಮೂಲಕ ಇತರ ಸಂಬಂಧಗಳು ಉತ್ತಮಗೊಳ್ಳುತ್ತದೆ

 

ಈ ಸಾಹಸ ಕ್ರೀಡೆಯಲ್ಲಿ ತೊಡಗಬೇಕಾದರೆ ಸೂಕ್ತವಾದ ಸಲಕರಣೆಗಳ ಅಗತ್ಯವಿರುತ್ತದೆ.

ವಿಂಡ್ ಸರ್ಫಿಂಗ್
ಇದು ಗಾಳಿಯ ನೆರವಿನಿಂದ ಸರ್ಫಿಂಗ್ ಮಾಡುವುದು. ಇದು ಸೈಲಿಂಗ್ ಹಾಗೂ ಸರ್ಫಿಂಗ್‌ನ ಸಮ್ಮಿಲನವಾಗಿರುತ್ತದೆ. ಒಮ್ಮೆ ಪ್ರಯತ್ನಿಸಿದರೆ ಮತ್ತೆ ಮತ್ತೆ ಈ ಕ್ರೀಡೆಯಲ್ಲಿ ತೊಡಗಬೇಕೆಂದೆನಿಸುತ್ತದೆ. ಇದಕ್ಕೆ ಉತ್ತಮ ರೀತಿಯ ಸಮತೋಲನದ ಅಗತ್ಯವಿರುತ್ತದೆ. ಇದಕ್ಕೆ ಅಗತ್ಯವಿರುವ ತರಬೇತಿಯನ್ನು ನಮ್ಮ ತರಬೇತುದಾರರು ನೀಡುತ್ತಾರೆ. ಇದರಿಂದಾಗಿ ನೀವು ವಿಂಡ್‌ಸರ್ಫಿಂಗ್‌ನ ಸಂಪೂರ್ಣ ಉಪಯೋಗವನ್ನು ಪಡೆಯಬಹುದು.

ಕೊಂಡಜ್ಜಿ ಹಾಗೂ ವಾಣಿವಿಲಾಸ ಕೇಂದ್ರಗಳಲ್ಲಿ ನೀವು ಈ ಕ್ರೀಡೆಯ ಅನುಭವ ಪಡೆಯಬಹುದು. ದೇಹಕ್ಕೆ ಸಂಪೂರ್ಣವಾದ ಚಟುವಟಿಕೆ ಇದರಿಂದ ಸಿಗುತ್ತದೆ. ದೇಹವನ್ನು ಉತ್ತಮ ರೀತಿಯಲ್ಲಿ ದಂಡಿಸುತ್ತದೆ. ಮನರಂಜನೆಯ ಜತೆಯಲ್ಲಿ ದೇಹಕ್ಕೆ ಅಗತ್ಯವಿರುವ ವ್ಯಾಯಾಮ ಸಿಗುತ್ತದೆ.

ಪ್ರಯೋಜನ:

  • ದೇಹಕ್ಕೆ ಸಂಪೂರ್ಣ ವ್ಯಾಯಾಮ ಸಿಗುತ್ತದೆ.
  • ಹೃದಯ ಸಂಪೂರ್ಣವಾಗಿ ಚಟುವಟಿಕೆಯಲ್ಲಿರಲು ನೆರವಾಗುತ್ತದೆ.
  • ಗೆಳೆಯರು ಹಾಗೂ ಸಹುದ್ಯೋಗಿಗಳೊಂದಿಗೆ ಉತ್ತಮ ಸಂಬಂ‘ ಬೆಳೆಸಲು ನೆರವಾಗುತ್ತದೆ.
  • ಎಲ್ಲಕ್ಕಿಂತ ಮುಖ್ಯವಾಗಿ ಆಡ್ರಿನೆಲ್ ತ್ವರಿತವಾಗಿ ಕಾರ್ಯವೆಸಗುವಂತೆ ಮಾಡುತ್ತದೆ.
  • ಈ ಸಾಹಸದಲ್ಲಿ ಇನ್ನೂ ಹೆಚ್ಚು ಕಾಲ ವಿನಿಯೋಗಿಸುವಂತೆ ಮಾಡುತ್ತದೆ.

 

ಈ ಸಾಹಸ ಕ್ರೀಡೆ ಕೈಗೊಳ್ಳಲು ಪೂರಕವಾಗಿ ಸೂಕ್ತ ಸಲಕರಣೆಗಳ ಅಗತ್ಯವಿರುತ್ತದೆ

ವೈಟ್ ವಾಟರ್ ರಾಫ್ಟಿಂಗ್
ವೈಟ್ ವಾಟರ್ ರಾಫ್ಟಿಂಗ್ ಆಡ್ರಿನಲ್ ಗೃಂಥಿಗಳಿಗೆ ನೆರವಾಗುವ ಕ್ರೀಡೆ. ದುಮ್ಮಿಕ್ಕಿ ಹರಿಯುವ ನದಿಯೊಂದಿಗೆ ರಾಫ್ಟಿಂಗ್ ಮಾಡುವಾಗ ನಿಮಗೆ ಸಿಗುವ ಖುಷಿ ಹಾಗೂ ಕುತೂಹಲವನ್ನು ಬಣ್ಣಿಸಲು ಅಸಾಧ್ಯ. ಈ ಕ್ರೀಡೆಗೆ ಸಾಕಷ್ಟು ಅಭ್ಯಾಸದ ಅಗತ್ಯವಿರುತ್ತದೆ. ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯಲ್ಲಿ ನಿಮಗೆ ಅಗತ್ಯವಿರುವ ತರಬೇತಿ ನೀಡಿ, ನಿಮ್ಮನ್ನು ಈ ಸಾಹಸ ಕ್ರೀಡೆಗೆ ಸಜ್ಜುಗೊಳಿಸಲಾಗುತ್ತದೆ. ಬರಪೊಳೆ ಹಾಗೂ ವಾಣಿವಿಲಾಸ ಕೇಂದ್ರಗಳಲ್ಲಿ ನೀವು ಈ ಕ್ರೀಡೆಯಲ್ಲಿ ತೊಡಗಿಕೊಂಡರೆ ಅಪಾರ ಅನುಭವ ಪಡೆಯಬಹುದು.

ಪ್ರಯೋಜನ:

  • ಹೃದಯದ ರಕ್ತನಾಳಗಳನ್ನು ಬಲಿಷ್ಠಗೊಳಿಸುತ್ತದೆ.
  • ಸ್ನಾಯುಗಳನ್ನು ಬಲಿಷ್ಠಗೊಳಿಸುತ್ತದೆ
  • ತಂಡವನ್ನು ಸಿದ್ಧಪಡಿಸಲು ಇದು ಉತ್ತಮ ಕ್ರೀಡೆ.
  • ನೀರಿನಲ್ಲಿ ಅದ್ಭುತವಾದ ಅನುಭವ ಸಿಗುತ್ತದೆ
  • ಗೆಳೆಯರು ಹಾಗೂ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಬಹುದಾದ ಅದ್ಭುತ ಅನುಭವ ಸಿಗುತ್ತದೆ.

 

ಈ ಕ್ರೀಡೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಸೂಕ್ತವಾದ ಸಲಕರಣೆಗಳ ಅಗತ್ಯವಿರುತ್ತದೆ.

ದಾಖಲಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Change this in Theme Options
Change this in Theme Options