ಭೂ ಸಾಹಸ

ರಾಕ್ ಕ್ಲೈಮ್ಬಿಂಗ್ , ಕಾಡಿನ ಹಾದಿಯಲ್ಲಿ ಟ್ರಕ್ಕಿಂಗ್, ರಾತ್ರಿ ಮತ್ತು ಹಗಲಿನಲ್ಲಿ ನೇವಿಗೇಶನ್, ಮ್ಯಾಪ್ ಓದುವುದು, ನದಿಯನ್ನು ದಾಟುವುದು, ನಿಸರ್ಗದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು, ವೈಜ್ಞಾನಿಕ ಪರಿಶೋಧನೆ, ಸ್ಪೋರ್ಟ್ ಕ್ಲೈಮ್ಬಿಂಗ್ ಇತ್ಯಾದಿಗಳು ಭೂ ಸಾಹಸದಲ್ಲಿ ಸೇರಿರುತ್ತವೆ.

ಸ್ಪೋರ್ಟ್‌ ಕ್ಲೈಮ್ಬಿಂಗ್

ಸ್ಪೋರ್ಟ್‌ ಕ್ಲೈಮ್ಬಿಂಗ್ ಕೋರ್ಸ್, ಎಸ್‌ಸಿ ಅಥ್ಲೀಟ್ಸ್ ತರಬೇತಿ ಕಾರ್ಯಕ್ರಮ, ಇಂಡಿಪೆಂಡೆನ್ಸ್ ಕಪ್, ಬಿಲೇಯರ್ಸ್ ಕೋರ್ಸ್, ಆಕ್ಟಿವಿಕಿಟಿ ಸೂಪರ್‌ವೈಸರ್ಸ್ ಕೋರ್ಸ್, ಕೋಚಸ್ ಟ್ರೈನಿಂಗ್ ಪ್ರೋಗ್ರಾಂ, ದಕ್ಷಿಣ ವಲಯ ಕ್ಲೈಮ್ಬಿಂಗ್ ಸ್ಪರ್ಧೆ, ಪ್ಯಾರಾ ಕ್ಲೈಮ್ಬಿಂಗ್ ಕಪ್, ಏಷ್ಯಾ ಕಪ್ ಹಾಗೂ ವಿಶ್ವ ಚಾಂಪಿಯನ್‌ಷಿಪ್ ಸೇರಿದಂತೆ ಪ್ರಮುಖ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಅವಕಾಶವಿರುತ್ತದೆ.

ವೇಳಾಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಕ್ ಕ್ಲೈಮ್ಬಿಂಗ್
Iನಿಮಗೆ ಜಗತ್ತಿನ ತುತ್ತ ತುದಿಗೇರಿದ ಅನುಭವ ಸಿಗಬೇಕೇ?, ನೀಮಗಾಗಿ ಇದೆ ರಾಕ್ ಕ್ಲೈಮ್ಬಿಂಗ್ . ಇದಕ್ಕಾಗಿ ದೇಹದಲ್ಲಿ ಸಾಕಷ್ಟು ಸಾಮರ್ಥ್ಯ, ತ್ರಾಣದ ಜತೆಯಲ್ಲಿ ವಿವಿಧ ಕ್ಲೈಮ್ಬಿಂಗ್ ಬಗ್ಗೆ ಅಪಾರ ಅರಿವು ಇರಬೇಕು. ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯಲ್ಲಿ ಹಂತಹಂತವಾಗಿ ರಾಕ್ ಕ್ಲೈಮ್ಬಿಂಗ್ ಬಗ್ಗೆ ತರಬೇತಿ ನೀಡಲಾಗುತ್ತದೆ. ಅಲ್ಲದೆ ಕ್ಲೈಮ್ಬಿಂಗ್ ವಿವಿಧ ಟೆಕ್ನಿಕ್ ಹಾಗೂ ಸುರಕ್ಷಾ ವಿಧಾನಗಳ ಬಗ್ಗೆ ತಿಳಿಸಲಾಗುವುದು. ಆರಂಭದ ಹಂತಗಳನ್ನು ಸಮಗ್ರವಾಗಿ ತಿಳಿದುಕೊಂಡರೆ ಎತ್ತರಕ್ಕೇರುವ ಹಾದಿ ಮತ್ತಷ್ಟು ಸುಲಭವಾಗುತ್ತದೆ.

ಬದಾಮಿ ಹಾಗೂ ರಾಮನಗರ ರಾಜ್ಯದ ಉತ್ತಮ ರಾಕ್‌ ಕ್ಲೈಮ್ಬಿಂಗ್ ಕೇಂದ್ರಗಳಾಗಿವೆ. ಉತ್ತಮ ಅನುಭವ ಹೊಂದಿರುವ ಹಾಗೂ ಆರಂಭಿಕ ಆರೋಹಿಗಳಿಗೆ ಈ ಎರಡೂ ಕೇಂದ್ರಗಳು ಸೂಕ್ತವಾಗಿವೆ.

ಪ್ರಯೋಜನ:

    • ತ್ವರಿತ ಗತಿಯಲ್ಲಿ ನಿರ್ಣಯ ಕೈಗೊಳ್ಳಲು ಅನುಕೂಲವಾಗುತ್ತದೆ
    • ಒಂಟಿಯಾಗಿ ಖುಷಿಯಾಗಿರಲು ಸಾಧ್ಯವಾಗುವ ಅದ್ಭುತ ಚಟುವಟಿಕೆ.
    • ಬೇರೆ ಬೇರೆ ಕ್ಲೈಮ್ಬಿಂಗ್ ಹಾದಿಗಳನ್ನು ಕಂಡುಕೊಳ್ಳಲು ಅದ್ಭುತ ಅವಕಾಶ.
    • ಕೈ, ಕಾಲು, ಭುಜ ಹಾಗೂ ಸ್ನಾಯುಗಳನ್ನು ಬಲಿಷ್ಠಗೊಳಿಸುತ್ತದೆ.

 

ರಾಕ್ ಕ್ಲೈಮ್ಬಿಂಗ್ ನಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಲು ಸೂಕ್ತ ಸಲಕರಣೆಗಳಿಂದ ತರಬೇತಿ ಅಗತ್ಯ.

ಟ್ರೆಕ್ಕಿಂಗ್
ನಿಸರ್ಗದೊಂದಿಗೆ ನಾವು ಬೆರೆತು, ನಮ್ಮನ್ನು ಮರೆಯುವ ಸಾಹಸವೆಂದರೆ ಅದು ಟ್ರೆಕ್ಕಿಂಗ್. ನಿಮ್ಮ ಸುತ್ತಲೂ ಇರುವ ಪ್ರಕೃತಿ ಸೌಂದರ್ಯವನ್ನು ಸವಿಯುತ್ತ ಒಂಟಿಯಾಗಿ ಅಥವಾ ಗುಂಪಿನೊಂದಿಗೆ ಸಂಭ್ರಮಿಸಬಹುದು. ಸಲಹೆಗಾರರು ನಿಮಗೆ ವಿವಿಧ ರೀತಿಯ ಮಾರ್ಗಗಳನ್ನು ತೋರಿಸುತ್ತಾರೆ. ಆಯ್ಕೆ ನಿಮ್ಮದು. ನಿಮ್ಮ ಟ್ರೆಕ್ಕಿಂಗ್ ಯಶಸ್ವಿಯಾಗಲು ಅಗತ್ಯವಿರುವ ಸುರಕ್ಷಾ ಮಾರ್ಗಗಳನ್ನು ತರಬೇತುದಾರರು ಸೂಚಿಸುತ್ತಾರೆ.

ರಾಮನಗರ ಹಾಗೂ ಕಾರವಾರ ಉತ್ತಮವಾದ ಟ್ರೆಕ್ಕಿಂಗ್ ಮಾರ್ಗಗಳನ್ನು ಹೊಂದಿದ್ದು, ನಿಮ್ಮ ಸಾಹಸ ಯಾತ್ರೆಗೆ ಸೂಕ್ತವಾಗಿದೆ. ಒಂಟಿಯಾಗಿ ಅಥವಾ ಕುಟುಂಬ, ಗೆಳೆಯರೊಂದಿಗೆ ಟ್ರೆಕ್ಕಿಂಗ್ ಕೈಗೊಳ್ಳಲು ಇದು ಸೂಕ್ತ ತಾಣ.
ಪ್ರಯೋಜನ

   • ಗೆಳೆಯರು ಹಾಗೂ ಸಹೋದ್ಯೋಗಿಗಳಗೊಂದಿಗೆ ಉತ್ತಮ ಸಂಬಂಧ ಬೆಳೆಸಲು ಇದು ಯೋಗ್ಯ
   • ಹೃದಯದ ಸಮಗ್ರ ಆರೋಗ್ಯವನ್ನು ಉತ್ತಮಪಡಿಸುತ್ತದೆ.
   • ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
   • ಉತ್ತಮ ಪ್ರದೇಶವೊಂದರ ಸಮಗ್ರ ಅರಿವು ಹಾಗೂ ವನ್ಯಜೀವಿಗಳ ಬದುಕನ್ನು ಅರಿಯಲು ನೆರವಾಗುತ್ತದೆ.

 

ಟ್ರೆಕ್ಕಿಂಗ್ ಸಿದ್ಧತೆಗಾಗಿ ಸೂಕ್ತ ಸಲಕರಣೆಗಳ ಅಗತ್ಯವಿರುತ್ತದೆ.

ಪರ್ವತಾರೋಹಣ

ಸುಂದರ ದೃಶ್ಯಗಳು, ರೋಮಾಂಚನದ ಕ್ಷಣ ಇವುಗಳ ಜತೆಯಲ್ಲಿ ಪರ್ವತಾರೋಹಣ ನಿಮ್ಮನ್ನು ಪರಿಸರದ ಎತ್ತರ ಪ್ರದೇಶಕ್ಕೆ ಕೊಂಡೊಯ್ಯುತ್ತದೆ. ಪರ್ವತಾರೋಹಣ ಮಾಡಲು ಜ್ಞಾನ, ತಾಂತ್ರಿಕ ಅಂಶ ಹಾಗೂ ತಾಳ್ಮೆ ಅಗತ್ಯವಾಗಿರುತ್ತದೆ. ಇದಕ್ಕೆ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯಲ್ಲಿ ಉತ್ತಮ ರೀತಿಯ ತರಬೇತಿ ನೀಡಲಾಗುತ್ತದೆ. ನಿಮ್ಮ ಪರ್ವತಾರೋಹಣ ಸದಾ ಸ್ಮರಣೀಯವಾಗಿರುವಂತೆ ಮಾಡಲು ನಮ್ಮ ವೃತ್ತಿಪರ ತರಬೇತುದಾರರು ಉತ್ತಮ ರೀತಿಯ ಸಲಹೆ ಹಾಗೂ ಸುರಕ್ಷಾ ವಿಧಾನಗಳನ್ನು ಹೇಳಿಕೊಡುತ್ತಾರೆ.

ಬದಾಮಿ ಹಾಗೂ ರಾಮನಗರ ಕೇಂದ್ರಗಳಲ್ಲಿ ಪರ್ವತಾರೋಹಣದ ಬಗ್ಗೆ ತರಬೇತಿ ನೀಡಲಾಗುತ್ತದೆ. ಎಲ್ಲ ಪರ್ವತಾರೋಹಿಗಳು ಹಾಗೂ ಟ್ರೆಕ್ಕಿಂಗ್ ಉತ್ಸಾಹಿಗಳು ಅಗತ್ಯವಿರುವ ಮಾಹಿತಿಗಳನ್ನು ತಿಳಿದುಕೊಂಡು ಸಂಬಂಧಪಟ್ಟ ಸಾಹಸದಲ್ಲಿ ತೊಡಗಿಕೊಳ್ಳುವುದು ಕಡ್ಡಾಯ.

ಪ್ರಯೋಜನ

   • ರಕ್ತ ಸಂಚಲವನ್ನು ಉತ್ತಮಗೊಳಿಸುತ್ತದೆ.
   • ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
   • ಹತ್ತಿರದ ಹಳ್ಳಿ ಹಾಗೂ ನಗರದ ವಿಹಂಗಮ ನೋಟವನ್ನು ಪರಿಚಯಿಸುತ್ತದೆ.
   • ತಂಡ ನಿರ್ಮಾಣಕ್ಕೆ ಇದು ಉತ್ತಮ ಚಟುವಟಿಕೆ.
   • ನಿಸರ್ಗದ ಬಗ್ಗೆ ಅಪಾರ ಪ್ರೀತಿಯನ್ನು ಹುಟ್ಟಿಸುತ್ತದೆ.

 

ಈ ಸಾಹಸ ಯಾನವನ್ನು ಕೈಗೊಳ್ಳುವವರು ಸೂಕ್ತ ಸಲಕರಣೆಗಳನ್ನು ಉಪಯೋಗಿಸುವುದು ಉತ್ತಮ.

ಮೌಂಟೇನ್ ಬೈಕಿಂಗ್

ಕರ್ನಾಟಕದ ಭೂ ಪ್ರದೇಶ ಮೌಂಟೇನ್ ಬೈಕರ್‌ಗಳ ಸ್ವರ್ಗ ಎಂದೇ ಹೇಳಲಾಗುತ್ತದೆ. ಕುತೂಹಲದ ಹಾದಿಗಳು, ಉತ್ತಮ ಸೈಕ್ಲಿಂಗ್ ಸಲಕರಣೆಗಳನ್ನು ಹೊಂದಿರುವವರಿಗೆ ಇಲ್ಲಿ ನಡೆಸುವ ಮೌಂಟೇನ್ ಬೈಕಿಂಗ್ ಸಾಹಸ ಸದಾ ನೆನಪಿನಲ್ಲಿ ಉಳಿಯುವಂತೆ ಮಾಡುತ್ತದೆ. ಜೇತ್ನಾದಲ್ಲಿರುವ ತಜ್ಞರು ನಿಮ್ಮ ವಿವಿಧ ಮಾರ್ಗಗಳಿಗೆ ಕೊಂಡೊಯ್ದು ಸಲಹೆ ನೀಡುತ್ತಾರೆ. ಆದರೆ ಒಂಟಿಯಾಗಿ ಸವಾರಿ ಮಾಡುವ ಧೈರ್ಯ ನಿಮಗಿರಬೇಕು.

ನಿಮಗೆ ಸೈಕ್ಲಿಂಗ್‌ನಲ್ಲಿ ಅಪಾರ ಆಸಕ್ತಿ ಇದ್ದರೆ ವಾಣಿ ವಿಲಾಸ ಕೇಂದ್ರ ಅದಕ್ಕೆ ಉತ್ತಮ ಸ್ಥಳ. ವಾಣಿ ವಿಲಾಸ ಸಾಗರ ನಿಮ್ಮ ಸವಾರಿಗೆ ಮತ್ತಷ್ಟು ರಂಗು ನೀಡುತ್ತದೆ.

ಪ್ರಯೋಜನ

   • ಸ್ನಾಯುಗಳು ಬಲಿಷ್ಠಗೊಳ್ಳುತ್ತವೆ.
   • ರಕ್ತ ಸಂಚಲನವನ್ನು ಉತ್ತಮಪಡಿಸುತ್ತದೆ
   • ಕರ್ನಾಟಕದ ಪರ್ವತಮಯ ಭೂ ಪ್ರದೇಶವನ್ನು ಸುತ್ತುವ ಅವಕಾಶ.
   • ಹೊರಾಂಗಣದ ಬಗ್ಗೆ ಇರುವ ಪ್ರೀತಿಯನ್ನು ಹೆಚ್ಚಿಸುತ್ತದೆ.
   • ಕುಟುಂಬ, ಗೆಳೆಯರು ಹಾಗೂ ಸಹೋದ್ಯೋಗಿಗಳೊಂದಿಗೆ ಬೆರೆಯಲು ಉತ್ತಮ ಕ್ರೀಡೆ.

 
ಈ ಸಾಹಸ ಕ್ರೀಡೆಗೆ ಸಜ್ಜಾಗಲು ಸೂಕ್ತ ಸಲಕರಣೆಗಳನ್ನು ಹೊಂದಿರಬೇಕು.

ದಾಖಲಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Change this in Theme Options
Change this in Theme Options