ಸುರಕ್ಷತೆಗೆ ಮಾರ್ಗದರ್ಶಿ

ಟ್ರೆಕ್ಕಿಂಗ್, ಬಂಡೆ ಏರುವುದು ಹಾಗೂ ಪರ್ವತಾರೋಹಣ ಮೊದಲಾದ ಸಾಹಸ ಕಾರ್ಯಗಳಲ್ಲಿ ಪಾಲ್ಗೊಳ್ಳುವುದಕ್ಕೆ ಮುನ್ನ ಪರಿಸರವನ್ನು ಅರ್ಥಮಾಡಿಕೊಳ್ಳುವುದು ಪ್ರಮುಖ ಅಂಶವಾಗಿರುತ್ತದೆ. ಕರ್ನಾಟಕದಲ್ಲಿ ಪರ್ವತಾರೋಹಣ ಹಾಗೂ ಸಾಹಸ ಚಟುವಟಿಕೆಗಳಿಗೆ ಉತ್ತಮ ಪರಿಸರವಿದೆ. ಎರಡು ಪರ್ವತಾ ಶ್ರೇಣಿಗಳಾದ ಪಶ್ಚಿಮ ಹಾಗೂ ಪೂರ್ವ ಘಟ್ಟಗಳು ಹಾಗೂ ವಿಸ್ತಾರರವಾದ ಕರಾವಳಿ ಪ್ರದೇಶ ಇದಕ್ಕೆ ಸೂಕ್ತವಾಗಿದೆ. ವರ್ಷದ ಯಾವುದೇ ಕಾಲದಲ್ಲೂ ಇಲ್ಲಿ ಪ್ರಮುಖವಾಗಿ ಭೂ ಸಾಹಸ ಚಟುವಟಿಕೆಗಳಿಗೆ ಇಲ್ಲಿಯ  ಪರಿಸರ ಸೂಕ್ತವಾಗಿದೆ. ನೂರಾರು ಸಂಘಟನೆಗಳು ನಡೆಸುವ ಸಾಹಸ ಚಟುವಟಿಕೆಗಳಲ್ಲಿ ವಿವಿಧ ವಯೋಮಾನದ ಸಹಸ್ರಾರು ಯುವಕರು ಪಾಲ್ಗೊಳ್ಳುತ್ತಾರೆ. ವಿರಾಮ, ಶಿಕ್ಷಣ, ವ್ಯಕ್ತಿತ್ವ ವಿಕಸನ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ನೈಸರ್ಗಿಕ ಶಿಬಿರಗಳು ಇದರ ಭಾಗವಾಗಿದೆ.

.

1

ಸುರಕ್ಷತೆಗೆ ಸಂಬಂಧಿಸಿ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಾನ್ಯತೆ

ಒಂದು ವೇಳೆ ವಾಣಿಜ್ಯ ಉದ್ದೇಶಕ್ಕಾಗಿ ಸಾಹಸ ಚಟುವಟಿಕೆಗಳನ್ನು ನಡೆಸುವ ಕಂಪೆನಿ, ಘಟಕ ಅಥವಾ ಸಂಘಟನೆಗಳು ಈ ಕೆಳಗಿನ ದಾಖಲೆಗಳೊಂದಿಗೆ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯ ನಿರ್ದೇಶಕರಿಗೆ ಅರ್ಜಿ ಸಲ್ಲಿಸಬಹುದು.
೧.ಸಂಘಟನೆಯ ಅಧಿಕೃತ ದಾಖಲೆ ಪತ್ರದ ಪ್ರತಿ.
೨. ಸಂಘಟನೆಯ ಆಡಳಿತ ಮಂಡಳಿ ಹಾಗೂ ಅದರಲ್ಲಿರುವವರ ವೃತ್ತಿಪರ ಅರ್ಹತೆ ಹಾಗೂ ವಿಳಾಸ.
೩. ಕಂಪೆನಿಯು ತನ್ನಲ್ಲಿರುವ ತರಬೇತಿ ಪಡೆದ ವೃತ್ತಿಪರ ತರಬೇತುದಾರರ ವಿವರ ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡಬೇಕು. ಸೂಕ್ತ ಅರ್ಜಿ ನಮೂನೆಯಲ್ಲಿ ಅನುಭವದ ಕುರಿತು ಮಾಹಿತಿ, ಸಾಮರ್ಥ್ಯ ಇವುಗಳ ಬಗ್ಗೆ ವಿವರ ನೀಡಬೇಕು.
೪. ಕಂಪೆನಿಯಲ್ಲಿರುವ ಉತ್ತಮ ಗುಣಮಟ್ಟದ ಸಲಕರಣೆಗಳ ಬಗ್ಗೆ ಪಟ್ಟಿಯನ್ನು ನೀಡಬೇಕು.
೫. ಮಾನ್ಯತೆ ಪಡೆದ ಗುಣಮಟ್ಟದ ಸಲಕರಣೆಗಳ ಗುಣಮಟ್ಟವನ್ನು ಕಾಯ್ದುಕೊಳ್ಳಲು ಕಂಪೆನಿ ಯಾವ ರೀತಿಯ ಮಾರ್ಗವನ್ನು ಅನುಸರಿಸುತ್ತಿದೆ ಎಂಬುದರ ಬಗ್ಗೆ ವಿವರ.
೬. ಸಾಹಸ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿರುವವರ ರಕ್ಷಣೆ ಹಾಗೂ ಸುರಕ್ಷತೆ ಬಗ್ಗೆ ಯಾವ ರೀತಿಯ ಕ್ರಮ ಹಾಗೂ ಯೋಜನೆಗಳನ್ನು ರೂಪಿಸಿಕೊಳ್ಳಲಾಗಿದೆ ಎಂಬುದರ ಬಗ್ಗೆ ವಿವರ.
೭. ತುರ್ತು ಸಂದರ್ಭಗಳಲ್ಲಿ  ಕಾರ್ಯನಿರ್ವಹಿಸಲು ಯಾವ ರೀತಿಯ ಯೋಜನೆಗಳನ್ನು ರೂಪಿಸಿಕೊಳ್ಳಲಾಗಿದೆ ಎಂಬುದರ ಬಗ್ಗೆ ವಿವರ.
೮. ಜಿಲ್ಲಾಡಳಿತ ಅಥವಾ ಇತರ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆದಿರುವ ಬಗ್ಗೆ ಅಧಿಕೃತ ಪತ್ರ.
ಹೆಚ್ಚಿನ ಮಾಹಿತಿ ಹಾಗೂ ಅರ್ಜಿಗೆ ಈ ಲಿಂಕ್ ಕ್ಲಿಕ್ ಮಾಡಿ.

Application for the Accreditation of Adventure Tour Operators

Rules for Accreditation of Adventure Tour Operators at General Thimayya National Academy of Adventure

ಸದಸ್ಯತ್ವ ಪಡೆಯಲು

ಸಾಹಸ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಸಂಘಟನೆಯೊಂದು ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯಿಂದ ಸದಸ್ಯತ್ವ ಪಡೆಯಲು ಕೆಳಕಂಡ ದಾಖಲೆಗಳೊಂದಿಗೆ ಜೆತ್ನಾ ನಿರ್ದೇಶಕರಿಗೆ ಅರ್ಜಿ ಸಲ್ಲಿಸತಕ್ಕದ್ದು.
೧.ಸಂಬಂಧಪಟ್ಟ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿರುವ ಬಗ್ಗೆ ಪಡೆದ ದಾಖಲೆ ಪತ್ರ.
೨. ಸಂಘಟನೆಯ ಕಾರ್ಯವೈಖರಿಯ ಕುರಿತ ದಾಖಲೆಗಳು.
೩. ಸಂಘಟನೆಯ ಪದಾಧಿಕಾರಿಗಳು, ಸದಸ್ಯರ ಅವರ ವಿಳಾಸ ಹಾಗೂ ವಯಸ್ಸಿನ ಕುರಿತ ವಿವರಗಳನ್ನೊಳಗೊಂಡ ಪಟ್ಟಿ.
೪. ಸಂಸ್ಥೆಯ ಮೊದಲ ವಾರ್ಷಿಕ ಮಹಾಸಭೆಯ ವಿವರ ಅಥವಾ ಇತ್ತೀಚಿಗೆ ಅಂದರೆ ಆರು ತಿಂಗಳು ಮುಂಚಿತವಾಗಿ ನಡೆದ ವಾರ್ಷಿಕ ಮಹಾಸಭೆಯ ವಿವರಗಳನ್ನೊಳಗೊಂಡ ಮಾಹಿತಿ.
೫. ಅಗತ್ಯವಿರುವ ಶುಲ್ಕ.
೬. ಶೈಕ್ಷಣಿ ಸಂಸ್ಥೆಗಳಿಂದ ನಿರ್ಮಿಸಲ್ಪಟ್ಟ ಕ್ಲಬ್‌ಗಳು ಸಂಬಂಧಿಸಿದ ಶುಲ್ಕದ ಜತೆಯಲ್ಲಿ ಶೈಕ್ಷಣಿಕ ಸಂಸ್ಥೆಯ ಪ್ರಮುಖರು, ಈ ಸಂಸ್ಥೆ ಮಕ್ಕಳಲ್ಲಿ ಸಾಹಸ ಕ್ರೀಡೆಯನ್ನು ಬೆಳೆಸುವ ಉದ್ದೇಶದಿಂದ ಕ್ಲಬ್ ಸ್ಥಾಪಿಸಲಾಗಿದೆ ಎಂದು ಘೋಷಿಸಿರುವ ಪತ್ರವನ್ನು ಲಗತ್ತಿಸಬೇಕು.
ಅರ್ಜಿ ನಮೂನೆ ಹಾಗೂ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Application for the Affiliation of Nature Awareness and Adventure Club

Rules for Affiliation of Adventure Clubs and Adventure Organisations registered Under Karnataka Societies Act General Thimayya National  Academy of Adventure

Change this in Theme Options
Change this in Theme Options